• Building

    ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ

  • Building

    ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ

ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ

ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಯು ೨೦೦೫ ರಲ್ಲಿ ಪ್ರಾರಂಭವಾಗಿದ್ದು, ನಗರದ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ -206 ರಲ್ಲಿನ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ 25 ಎಕರೆ ವಿಶಾಲ ಕ್ಯಾಂಪಸ್ ಹೊಂದಿದೆ. ೩೪೪೮೮ ಚದರ ಮೀಟರ್ ಅಳತೆಯ ಕ್ಯಾಂಪಸ್ ನಲ್ಲಿ ವೈದ್ಯಕೀಯ ಕಾಲೇಜು, ಪುರುಷ ಹಾಗು ಮಹಿಳಾ ವಿದ್ಯಾರ್ಥಿ ನಿಲಯಗಳು ಮತ್ತು ವೈದ್ಯರ ವಸತಿ ಗೃಹ ಹೊಂದಿದೆ.
ವೈದ್ಯಕೀಯ ಕಾಲೇಜು ಪ್ರಯೋಗಾಲಯ, ವಸ್ತು ಸಂಗ್ರಹಾಲಯ , ಪರೀಕ್ಷಾ ಕೊಠಡಿಗಳು , ಸಭಾ ಭವನ , ಪ್ರವಚನ ಕೊಠಡಿಗಳು, ಸುಸಜ್ಜಿತ ಗ್ರಂಥಾಲಯ , ವ್ಯಾಯಾಮ ಶಾಲೆ ಮೊದಲಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿದೆ.

ಮೆಗ್ಗಾನ್ ಆಸ್ಪತ್ರೆಯು ಶಿವಮೊಗ್ಗ ವೈದ್ಯವಿಜ್ಞಾನ ಸಂಸ್ಥೆಯ ಬೋಧನಾ ಆಸ್ಪತ್ರೆಯಾಗಿದೆ. ಮೆಗ್ಗಾನ್ ಆಸ್ಪತ್ರೆಯು ೧೮೮೦ ರಲ್ಲಿ ಬ್ರಿಟಿಷ್ ಆಡಳಿತ ಕಾಲದಲ್ಲಿ ೭೦ ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿತ್ತು. ೧೯೯೧-೯೨ ರಲ್ಲಿ ೩೬೭ ಹಾಸಿಗೆಗಳ ಹೊಸ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಯಿತು.

Notifications