Mc Gann Hospital

ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ

ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯು 95೦ ಹಾಸಿಗೆ ಸಾಮರ್ಥ್ಯ ಹೊಂದಿದ್ದು, 24 X 7 ಅಪಘಾತ ತುರ್ತು ಚಿಕಿತ್ಸೆ , ತುರ್ತು ವಾಹನ ಸೇವೆ, ರಕ್ತನಿಧಿ, ನೇತ್ರಭಂಡಾರ, ನಿಯಂತ್ರಣ ಕೊಠಡಿ, ಕೇಂದ್ರೀಯ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಈ ಆಸ್ಪತ್ರೆಯಲ್ಲಿ ವೈದ್ಯಶಾಸ್ತ್ರ, ಶಸ್ತ್ರಚಿಕಿತ್ಸೆ, ಕಿವಿ,ಮೂಗು ಮತ್ತು ಗಂಟಲು, ನೇತ್ರಚಿಕಿತ್ಸೆ, ಚರ್ಮ ಮತ್ತು ಲೈಂಗಿಕರೋಗಚಿಕಿತ್ಸೆ, ಕ್ಷ-ಕಿರಣ, ಅರವಳಿಕೆ, ಮಾನಸಿಕ ರೋಗಚಿಕಿತ್ಸೆ, ದಂತಚಿಕಿತ್ಸೆ , ಎಆರ್ಟಿ, ಐಸಿಟಿಸಿ, ಎಸ್ಟಿಐ/ಆರ್ಟಿಐ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಡಯಾಲಿಸಿಸ್ ಹಾಗೂ ಎಂ.ಐ.ಸಿ.ಯು. ಸೌಲಭ್ಯಗಳು ಲಭ್ಯವಿರುತ್ತವೆ.

ಆಸ್ಪತ್ರೆಯಲ್ಲಿ ಎ.ಆರ್.ಟಿ. ಕೇಂದ್ರವು ಕಾರ್ಯನಿರ್ವಹಿಸುತ್ತಿದೆ. ಎ.ಆರ್.ಟಿ. ಕೇಂದ್ರದಲ್ಲಿ ಹೆಚ್.ಐ.ವಿ. ರೋಗಿಗಳಿಗೆ ಉಚಿತ ಕೌನ್ಸಲಿಂಗ್ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಯ ಆರ್.ಎನ್.ಟಿ.ಸಿ.ಪಿ. ಕೇಂದ್ರವು ಕ್ಷಯರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದ

ಆಸ್ಪತ್ರೆ ಸೌಲಭ್ಯಗಳು

  • ತುರ್ತು ಚಿಕಿತ್ಸೆ ಮತ್ತು ಅಪಘಾತ ಘಟಕ
  • ಆಂಬುಲೆನ್ಸ್ ಸೌಲಭ್ಯ
  • ರಕ್ತನಿಧಿ ಸೌಲಭ್ಯ (ಪೂರ್ಣ ರಕ್ತ ಮತ್ತು ಕಾಂಪೋನೆಂಟ್ಸ್)
  • ಕೇಂದ್ರೀಯ ಪ್ರಯೋಗಾಲಯ
  • ತುರ್ತು ಸೇವೆಗಳು
  • ಸಿ.ಟಿ. & ಎಕ್ಸ್ ರೇ ಸೌಲಭ್ಯ
  • ಪೋಸ್ಟ್ಮಾರ್ಟಮ್
  • ಕಂಟ್ರೋಲ್ ರೂಂ.
  • ಫಾರ್ಮಸಿ
  • ಸುಟ್ಟಗಾಯಗಳು ಮತ್ತು ವಿಷ ನಿರ್ವಹಣೆ
  • ತೀವ್ರ ನಿಗಾ ಘಟಕ - ಐಸಿಸಿಯು, ಎಂಐಸಿಯು, ಎಸ್ಎನ್ಸಿಯು, ಪಿಐಸಿಯು
  • ಜನನ ಮತ್ತು ಮರಣ ದೃಢೀಕರಣ

    ಆಸ್ಪತ್ರೆಯು ಈ ಕೆಳಕಂಡ ಯೋಜನೆಗಳ ಚಿಕಿತ್ಸೆಗಾಗಿ ಮಾನ್ಯತೆ ಪಡೆದಿರುತ್ತದೆ

  • ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ
  • ಯಶಸ್ವಿನಿ ಯೋಜನೆ
  • ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ವಾಜಪೇಯಿ ಆರೋಗ್ಯ ಶ್ರೀ ಯೋಜನೆ
  • ರಾಜೀವ್ ಆರೋಗ್ಯ ಭಾಗ್ಯ
  • ಜ್ಯೋತಿ ಸಂಜೀವಿ ಮತ್ತು ಮುಖ್ಯ ಮಂತ್ರಿಗಳ ಸಾಂತ್ವನ ಯೋಜನೆ

Services

previous arrow
next arrow
previous arrownext arrow
Slider